'ತೂಗುದೀಪ' ಕುಟುಂಬದಿಂದ ಮತ್ತೋರ್ವ ಹೀರೋ ಚಿತ್ರರಂಗಕ್ಕೆ! ಹಿರಿಯ ನಟರ ಕುಟುಂಬದಿಂದ ಚಿತ್ರರಂಗಕ್ಕೆ ಕಲಾವಿದರುಗಳು ಎಂಟ್ರಿ ಕೊಡುತ್ತಲೇ ಇರುತ್ತಾರೆ. ಅದೇ ರೀತಿ ನಟ ತೂಗುದೀಪ ಶ್ರೀನಿವಾಸ್ ಕುಟುಂಬದಿಂದ ಈಗಾಗಲೇ ಮೂರು ಕಲಾವಿದರು ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ಹಾದಿಯಲ್ಲಿ ಇದೀಗ ಮತ್ತೊಬ್ಬ ನಟ ಸಿನಿಮಾ ಜರ್ನಿ ಪ್ರಾರಂಭ ಮಾಡೋದಕ್ಕೆ ಸಿದ್ದತೆ ನಡೆಸಿದ್ದಾರೆ. ಸದ್ಯ ತೂಗುದೀಪ ಕುಟುಂಬದಿಂದ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿರುವ ಕಲಾವಿದ ಮನೋಜ್.! ದರ್ಶನ್ ಜೊತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ಮನೋಜ್ ಸಿನಿಮಾರಂಗದಲ್ಲಿ ನಾಯಕನಾಗಿ ಅಭಿನಯಿಸೋದಕ್ಕೆ ತಯಾರಿ ಮಾಡಿಕೊಳ್ತಿದ್ದಾರೆ. ದರ್ಶನ್ ಜೊತೆಯಲ್ಲಿ ಈಗಾಗಲೆ 'ಚಕ್ರವರ್ತಿ' ಹಾಗೂ 'ಅಂಬರೀಶ' ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಮನೋಜ್ ಸದ್ಯ ಕನ್ನಡ ಸಿನಿಮಾರಂಗಕ್ಕೆ ನಾಯಕನಾಗಿ ಪರಿಚಯವಾಗಲಿದ್ದಾರೆ. ಮನೋಜ್ ಕೂಡ ದರ್ಶನ್ ರಷ್ಟೇ ಹೈಟ್ ಇರುವ ಕಲಾವಿದ. ಈಗಾಗಲೇ ಮನು ಚಿತ್ರರಂಗದಲ್ಲಿ ಯಶಸ್ಸು ಕಾಣುವ ಎಲ್ಲಾ ಭರವಸೆ ಹುಟ್ಟಿಕೊಂಡಿದೆ. ಅಭಿನಯಿಸಿರುವ ಎರಡು ಸಿನಿಮಾಗಳಲ್ಲಿ ಮಾಸ್ ಫೀಲ್ ಕೊಡುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಆಕ್ಷನ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರುವ ಸಾಧ್ಯತೆಗಳಿವೆ.